January 27, 2008 at 3:19 pm (Uncategorized)

ಜಗತ್ತಿನಲ್ಲಿ ಬೇರೆಲ್ಲರೂ ಉದ್ಧಾರ ಆಗ್ತಿದ್ದಾರೆ, ನಾನು ಸರಿಯಾಗುವುದು ಯಾವಾಗ? ಅಂತ ಯೋಚ್ನೆ ಮಾಡ್ತಾ ಬರ್‍ತಾಯಿದ್ದೆ.ನಮ್ಮ ಆಫೀಸ್ ಇರೋದು ರಾಜಭವನದ ಪಕ್ಕದ ರಸ್ತೆಯಲ್ಲಿ.ಎಸೈನ್‌ಮೆಂಟ್ ಆಗಷ್ಟೇ ಮುಗಿದಿತ್ತು. ನಾಳೆ ಏನಾದ್ರೂ ಸ್ಪೆಷಲ್ ಸ್ಟೋರಿ ಕೊಡ್ಲೇಬೇಕು ಅಂತ ಬೇರೆ ನಮ್ಮ ಚೀಫ್ ರಿಪೋರ್ಟರ್ ತಾಕೀತು ಮಾಡಿದ್ರು.. ಆ ಕ್ಷಣಕ್ಕೆ ನನಗೆ ಜಗತ್ತೇ ಖಾಲಿಯಾದಂತೆ ತೋರಿತು. ನಾನು ವಿಶೇಷ ವರದಿ ಮಾಡದೇ ಹತ್ತಿರತ್ತಿರ ತಿಂಗಳಾಗಿತ್ತು..ಹಾಗಾಗಿ ಮುಖ್ಯವರದಿಗಾರರಿಂದ ನಿರಂತರ ಬೆದರಿಕೆ.॒ಏನು ಮಾಡಲೂ ತೋಚದೇ ರಾಜಭವನ ರಸ್ತೆಯಲ್ಲಿ ಕೈಬೀಸಿಕೊಂಡು ಹೆಜ್ಜೆಹಾಕುತ್ತಿದ್ದೆ. ಅಲ್ಲಿಂದ ವಿದಾನ ಸೌಧದ ಕಡೆ ತಿರುಗಿದಾಗ ಬಾಡಿದ ಮುಖವೊಂದು ಕೈಯೊಡ್ಡಿತು. ಸುಮಾರು ಮೂವತ್ತು ಮೂವತ್ತೈದರ ಹೆಣ್ಣುಮಗಳು..ಕೈಯಲ್ಲೊಂದು ಪುಟ್ಟ ಹಸುಗೂಸು. ಆಗ ತಾನೆ ಹಾಲು ಕುಡಿದು ಮಲಗಿದಂತಿತ್ತು. ಸಿಕ್ಕಿದ ಚಿಲ್ಲರೆ ತೆಗೆದುಕೊಟ್ಟೆ. ಹಣವನ್ನು ಚೀಲಕ್ಕೆ ಹಾಕಿ ಬೇಗ ಬೇಗ ನಡೆಯತೊಡಗಿದಳು. ಆಕೆ ಅಷ್ಟು ರಭಸದಿಂದ ನಡೆಯುತ್ತಿದ್ದರೂ, ಆ ಪುಟ್ಟ ಕಂದಮ್ಮನಿಗೆ ಎಚ್ಚರವೇ ಆಗುತ್ತಿಲ್ಲನಿ॒ನ್ದು ಎಂಥ ಗಾಢ ನಿದ್ದೆಯೋ ಪೋರಅ॒ಂದುಕೊಂಡು ಆಕೆಯ ಹಿಂದೆಯೇ ಹೆಜ್ಜೆ ಹಾಕಿದೆ. ಸ್ವಲ್ಪ ಮುಂದೆ ಹೋದಾಗ ಮಗು ತುಸು ಅಲ್ಲಾಡಿತು. ಎಚ್ಚರಾಗಿದ್ದೇ ಮುಸು ಮುಸು ಅಳುವಿಗಿಟ್ಟುಕೊಂಡಿತು. ಈಕೆ ಗಡಿಬಿಡಿಯಿಂದ ಅಲ್ಲಿಂದ ದಾಟಿ, ಕಬ್ಬನ್ ಪಾರ್ಕ್‌ನತ್ತ ನಡೆಯತೊಡಗಿದಳು. ಸ್ವಲ್ಪ ಮುಂದೆ ಬಂದು ಮರದಡಿ ಕೂತು ನೀರಿನ ಬಾಟಲಿ ತೆಗೆದು, ಅದಕ್ಕೆ ಯಾವುದೋ ಮಾತ್ರೆ ಹಾಕಿ, ಮಗುವಿಗೆ ಕುಡಿಸಿದಳು. ನೀರು ಸ್ವಲ್ಪ ಕಹಿಯಾಗಿರ್‌ಬೇಕು, ಮಗು ಮೊದಲು ನೀರಿನ ಬಾಟಲಿಯನ್ನು ತನ್ನ ಪುಟ್ಟ ಕೈಯಿಂದ ತಳ್ಳತೊಡಗಿತು. ಆ ಹೆಂಗಸು ಮಗುವಿನ ಕಾಲನ್ನು ತನ್ನ ಕಾಲೊಳಗೆ ತೂರಿಸಿ ಹಿಡಿದು, ಅದರ ಎಳೇ ಮೂಗನ್ನು ಕೆಂಪಾಗುವಂತೆ ಒತ್ತಿ ಹಿಡಿದು,ಬಾಯಿ ತೆರೆಸಿ ನೀರು ಕುಡಿಸಲು ಶುರುವಿಟ್ಟಳು. ಮಗು ಕಿಟಾರನೆ ಕಿರಿಚುತ್ತಾ ಉಸಿರಾಡಲು ಹೆಣಗಾಡುತ್ತಿತ್ತು. ಆದರೂ ಹೆಂಗಸಿನ ಕೈ ಸಡಿಲವಾಗಲಿಲ್ಲ. ಸ್ಪಲ್ಪ ಹೊತ್ತಾದ ಮೇಲೆ ಮಾತ್ರೆಯ ಪ್ರಭಾವಕ್ಕೋ ಅಥವಾ ಪ್ರಜ್ಙೆ ತಪ್ಪಿಯೋ ಮಗು ಮತ್ತೆ ಕಣ್ಮುಚ್ಚಿತು.ಈಕೆ ನಿಟ್ಟಿಸಿರು ಬಿಟ್ಟು ಅಲ್ಲೇ ಹೋಗಿ ಬರುವವರ ಎದುರು ಕೈಚಾಚುತ್ತಿದ್ದಳು. ಈಕೆಯ ದೈನ್ಯ ಮುಖ ಕಂಡು ಜನ ಒಂದಿಷ್ಟು ಚಿಲ್ಲರೆ ಚೆಲ್ಲುತ್ತಿದ್ದರು. ಅಷ್ಟರಲ್ಲಿ ಪಕ್ಕದಲ್ಲೇ ಅಂತದೇ ಪುಟ್ಟ ಸಣಕಲು ಮಗು ಹಿಡಿದುಕೊಂಡು ಹುಡುಗಿ ಪ್ರತ್ಯಕ್ಷಳಾಗಿ, ಈ ಹೆಂಗಸಿನೊಂದಿಗೆ, ಹಿಂದಿ ಬೆರೆತ ಭಾಷೆಯಲ್ಲಿ ಮಾತಿಗಾರಂಭಿಸಿದಳು. ಆಕೆ ಎಷ್ಟಾಯ್ತು? ಎಂದಾಗ ಈಕೆ, ಮಗುವಿನತ್ತ ಕೈ ತೋರಿಸಿ, ಈ ಪೀಡೆಯಿಂದಾಗಿ ಏನು ವ್ಯಾಪಾರಾನೂ ನಡೀತಿಲ್ಲ. ಮೊದ್ಲು ಇದನ್ನು ಬದಲಿಸಬೇಕು, ಪ್ರತೀ ದಿನ ನೂರು ರೂಪಾಯಿ ಕೊಡೋದು ದಂಡ. ಅಸಲೇ ಬರಲ್ಲ. ಮೊದ್ಲು ಸುಮ್ಮನಿರ್‍ತಿತ್ತು. ಈಗ ಪಿರಿಪಿರಿ ಜಾಸ್ತಿಯಾಗಿದೆಅ॒ಂತ ಶುರುವಿಟ್ಟುಕೊಂಡಳು. ಆ ಹುಡುಗಿ, ಏನಾದ್ರೂ ಕೊಟ್ಯಾ? ಕೇಳಿದಳು. ನಮ್ಮ ಹೊಟ್ಟೆಗೇ ಗತಿಯಿಲ್ಲ, ಇದಕ್ಕೆ ಬೇರೆ ಕೇಡು ಉಢಾಫೆಯಿಂದ ಉತ್ತರಿಸಿದಳು. ನಿಂಗೇನು, ಇನ್ನೂ ಅಂತಾ ವಯಸ್ಸಾಗಿಲ್ಲ..ಇನ್ನೊಂದು ಹೆತ್ತು ಬಿಡು. ಆಗ ನೂರು ರೂಪಾಯಿ ಕೊಡೋದೂ ಉಳೀತು.॒ಅಂತ ಹುಡುಗಿ ಏನೋ ಪೋಲಿ ಜೋಕು ಹಾರಿಸಿ ಜೋರಾಗಿ ನಕ್ಕಳು. ಈಕೆ ಮೂತಿ ಸೊಟ್ಟಗೆ ಮಾಡಿ, ಅದೇ ಧಾಟಿಯಲ್ಲಿ ಉತ್ತರಿಸಿದಳು. ನಿಂಗೇನು ಹುಡ್ಗೀ, ವಯಸ್ಸಿದೆ, ತಾಖತ್ತಿದೆ, ಎವತ್ತೆಷ್ಟು ಮಿಕಗಳು? ಎಂದು ಹುಬ್ಬು ಹಾರಿಸಿ, ಮತ್ತೆ ವ್ಯಾಪಾರದತ್ತ ಗಮನಹರಿಸಿದಳುನಾ॒ನು, ಕ್ಯಾಮರಾ ಸಮೇತ ಇವರನ್ನು ಬಲಿಹಾಕೋದು ಹೇಗೆ? ಅಂತ ಯೋಚಿಸ್ತಾ ಆಫೀಸ್ ಕಡೆ ಮುಖ ಮಾಡಿದೆ.

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.