ಪ್ರಜಾಪ್ರಭುತ್ವ ಪ್ರಹಸನ

February 21, 2008 at 4:11 pm (Uncategorized)

                                   ಪ್ರಜಾಪ್ರಭುತ್ವ ಪ್ರಹಸನ

ಪಾಕ್ ಚುನಾವಣೆ ನಂತರದ ಬೆಳವಣಿಗೆ ಗಮನಿಸಿದ್ರೆ ಪ್ರಾಪಂಚಿಕ ಮಟ್ಟದಲ್ಲಿ ರಾಜಕೀಯ ಅನ್ನುವುದು ಕಾಲ,ದೇಶಗಳ ಪರಿಮಿತಿಯ ಎಲ್ಲೆ ದಾಟಿರುವುದು ತಿಳಿದು ಬರುತ್ತದೆ.  ಪಾಕ್ ಮೊದಲಿನಿಂದಲೂ ಸಿದ್ಡಾಂತದ ಬೇರಿನಿಂದಲೇ ಜೀವಿಸುತ್ತಿರುವ ರಾಷ್ಟ್ರ್‍ಅ. ಸದಾ ಬೇರೆ ರಾಷ್ಟ್ರಗಳ ಜತೆ ಪಾಕ್ ಕದನಕ್ಕಿಳಿಯುದಕ್ಕೆ ಮೂಲ ಕಾರಣವೂ ಧಾರ್ಮಿಕತೆ, ಸಿದ್ಧಾಂತಗಳ ಬೇರನ್ನು ಬಲಪಡಿಸುವುದೇ. ಏನೇ ಇರಲಿ, ಇಂತಹ ರಾಷ್ಟ್ರದಲ್ಲಿ ಬಿಗಿ ಮಿಲಿಟರಿ ಆಳ್ವಿಕೆಯ ೫ ವರ್ಷದ ನಂತರ ಚುನಾವಣೆ ನಡೆದಿದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದಕ್ಕೆ ಪ್ರಮುಖ ಕಾರಣ, ಉಸಿರುಗಟ್ಟಿಸುತ್ತಿದ್ದ ಮಿಲಿಟರಿ ಆಳ್ವಿಕೆಯಿಂದ ಹೊರಬಂದು ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂಬ ಮನಸ್ಸು. ಜತೆಗೆ ಭುಟ್ಟೋ ಅವರ ಮೇಲಿನ ಅನುಕಂಪ. ಆದರೆ ಪಾಕ್ ಜನತೆಯ ಆಶಯ ಈಡೇರುವುದು ಕಷ್ಟ ಸಾಧ್ಯ ಅನಿಸುತ್ತಿದೆ. ಯಾಕೆಂದರೆ ಅಧಿಕಾರಶಾಹಿ ಮುಷರಫ್ ತನಗೆ ಜನಾದೇಶವಿಲ್ಲದಿದ್ದರೂ, ಭುಟ್ಟೋ ಅವರ ಪೀಪಲ್ಸ್ ಪಾರ್ಟಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರವನ್ನು ಉಪಾಯವಾಗಿ ಕಸಿಯುವ ಹುನ್ನಾರದಲ್ಲಿದ್ದಾರೆ ಮುಷರಫ್. ಕಳೆದ ೫ ವರ್ಷ ಆಡಳಿತದಲ್ಲಿ ಸ್ವಾರ್ಥ ಸಾಧನೆಗಾಗಿ ಅತೀ ಹೆಚ್ಚು ಸಮಯವನ್ನು ಮುಷರಫ್ ವ್ಯಯಿಸಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.  ಇದೀಗ ಅಧಿಕಾರಕ್ಕಾಗಿ ಪೀಪಲ್ಸ್ ಪಾರ್ಟಿಯ್ ಉಪಾಧ್ಯಕ್ಷ ಆಸಿಫ್ ಆಲಿ ಝರ್ದಾರಿ ಅವರನ್ನು ಬೆಂಬತ್ತಿರುವ ಮುಷರಫ್ ನಡವಳಿಕೆಗೆ ಪ್ರಜ್ಜ಼ಾವಂತರ ತೀವ್ರ ವಿರೋಧ ವ್ಯಕ್ತವಾಗಿದೆ. ಜನಾದೇಶವನ್ನೂ ಮೀರಿ ಅಧಿಕಾರ ಕಸಿಯುವ ಮುಷರಫ್, ಯಾವುದೇ ಕಾರಣಕ್ಕೂ ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಜತೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಝರ್ದಾರಿ ಅವರಿಗೆ ತಾಕೀತು ಮಾಡುತ್ತಾರೆ. ಇದರೊಂದಿಗೆ ನಾನು ಪ್ರಜಾಪ್ರಭುತ್ವವನ್ನು ಬೆಂಬಲಿಸುತ್ತೇನೆ. ಆದರೆ, ಅಧಿಕಾರ ಬಿಟ್ಟಿಳಿಯುವುದಿಲ್ಲ ಎಂದೂ ಮುಷರಫ್ ಹೇಳುತ್ತಾರೆ. ಹಾಗೆಂದು ಮುಶರಫ್ ಜರ್ದಾರಿ ಮನವೊಲಿಸಿ ತಮ್ಮತ್ತ ಸೆಳೆದರೆ ಮಾತ್ರ ಅವರಿಗೆ ಉಳಿಗಾಲ. ಇಲ್ಲವಾದಲ್ಲಿ ನವಾಬ್ ಶರೀಫ್ ಹಾಗೂ ಜರದಾರಿ ಜತೆಗೂಡಿ ಮುಶರಫ್ ಅವರನ್ನು ಜೈಲಿಗೆ ಕಳಿಸುವ ಸಾಧ್ಯತೆ ಇದೆ. ಅದಕ್ಕಾಗಿ ಇದೀಗ ಮುಶರಫ್ ಅವರು ತಮ್ಮೊಂದಿಗೆ ಆಡಳಿತದಲ್ಲಿ ಕೈಜೋಡಿಸದ್ದರೆ ಜೈಲಿಗೆ ಕಳಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಹಾಗೆ ನೋಡಿದ್ರೆ ತಮ್ಮ ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಭುಟ್ಟೋ ಹತ್ಯೆಗೆ ಪರೋಕ್ಷ ಬೆಂಬಲ ನೀಡಿರಬೇಕೆಂಬ ಅನುಮಾನ ಇದೆ. ಸ್ವತಃ ಭುಟ್ಟೋ ಅವರೇ  ತಮ್ಮ ಕೊನೆಯ ಪುಸ್ತಕ ‘ರಿ ಕನ್ಸಿಲಿಯೇಶನ್: ಇಸ್ಲಾಮಿಕ್ ಡೆಮಾಕ್ರೆಸಿ ಆಂಡ್ ದಿ ವೆಸ್ಟ್’ ಕ್ರ್‍ಅತಿಯಲ್ಲಿ ತಮ್ಮ ಹತ್ಫ಼ೆ ಸಂಭವಿಸುವ ಬಗೆಗೆ ಅನುಮಾನ ವ್ಯಕ್ತಪಡಿಸಿದರು. ಜತೆಗೆ, ಈ ವಿಷಯ ತಿಳಿಸಿದರೂ, ಕನಿಷ್ಟ ಭದ್ರತೆಯನ್ನೂ ಒದಗಿಸದ ಮುಶರಫ್ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಅಂತೂ ಭುಟ್ಟೋ ಹತ್ಯೆ ಊಹಿಸಿದಂತೆ ನಡೆದೇಹೋಯಿತು. ಮುಶರಫ್ ಅವರ ಆತಂಕ ತುಸು ಕಡಿಮೆಯಾಯಿತು. ಇದೀಗ, ಚುನಾವಣೆಯಲ್ಲಿ ದಯನೀಯವಾಗಿ ಸೋತ ಬಳಿಕ ಮುಶರಫ್ ಆತಂಕ ಮತ್ತೆ ಟಿಸಿಲೊಡೆದಿದೆ. ಹಾಗಾಗಿ ಬೆದರಿಕೆ ತಂತ್ರ ಅನುಸರಿಸುತ್ತಿದೆ. ಇದೀಗ, ತಮ್ಮ ಪಕ್ಷದ ನಾಯಕಿಯ ಹತ್ಯೆಗೆ ಪರೋಕ್ಷವಾಗಿ ಕಾರಣರಾದ ಮುಶರಫ್ ಅವರ ಈ ಬೆದರಿಕೆ ತಂತ್ರಕ್ಕೆ ಮಣಿದು ಅವರ ಜತೆಗೇ ಹೊಂದಾಣಿಕೆ ಮಾಡಿಕೊಳ್ಳುತ್ತದೋ ಗೊತ್ತಿಲ್ಲ. ಒಟ್ಟಾರೆ,ಪಾಕ್ ನಲ್ಲಿ ಚುನಾವಣೆ ನಡೆದರೂ ಪ್ರಜಾಪ್ರಭುತ್ವದ ಯೋಗ ಬರುವ ಲಕ್ಷಣ ಕಾಣುತ್ತಿಲ್ಲ.

Permalink Leave a Comment

ಸ್ಪೋಟ

January 28, 2008 at 4:38 pm (Uncategorized)

ನಾಯಿ ಬಾಲಕ್ಕೆ ಪಟಾಕಿ ಹಚ್ಚಿ
ಅದು ಸಿಡಿಯುವುದನ್ನೇ ಕಾಯುವ ಆ ಪೋಲಿ ಹುಡುಗ
ತುಟಿ ಕಚ್ಫಿ, ಕಿವಿ ನಿಮಿರಿಸಿ,
ನಾಯಿ ಕುಂಯ್ ಎಂದರಚುತ್ತಾ
ಓದುವುದನ್ನೇ ಕಾತರಿಸುತ್ತಾ
ಏದುಸಿರು ಬಿದುತ್ತಿದ್ದಾನೆ…..

ಹಚ್ಚಿದ ಬೆಂಕಿ
ಯಾವಾಗ ಸಿಡಿದು ಬಿಡುತ್ತದೋ…..
ಆ ದುಬಾರಿ ಹುಡುಗನಿಗೆ ಕ್ಷಣ ಅನ೦ತ

ಎದೆ ನಡುಗಿಸುವ ಸದ್ದಿಗೆ
ಕಿವಿ ಅದಾಗಲೇ ತಯಾರು
ಆತನ ಸರ್ವಾಂಗಗಳೂ ಶರಣು..

ಎದೆ ಬಡಿತಕ್ಕೂ ಆವೇಗ ಹೆಚ್ಚಿಸುವ ಉದ್ವಿಗ್ನತೆ
ಈಗ ಅವನಿಗೆ ಅವನಿಗಿಂತಲೂ
ಸಿಡಿತದ ಸದ್ದು, ನಾಯಿಯ ಆರ್ತನಾದವೇ ಪ್ರಿಯ.

ನಾಯಿ ಚಾಚಿದ ನಾಲಿಗೆ, ಆರ್ದ್ರ ಕಂಗಳಿಂದ
ಹುಡುಗನ್ನೇ ಸಮೀಪಿಸುತ್ತಿದೆ!
ಅವನ ಕೈಕಾಲು ನೆಕ್ಕುತ್ತಾ …..ಬಾಲ ಅಲ್ಲಾದಿಸುತ್ತಿದೆ,
ಈಗ ಇಬ್ಬರ ಕಂಗಳಲ್ಲೂ…
 ಸ್ಪೋಟವೊಂದು ಕಾದು ಕುಳಿತಿದೆ……

Permalink Leave a Comment

January 27, 2008 at 3:19 pm (Uncategorized)

ಜಗತ್ತಿನಲ್ಲಿ ಬೇರೆಲ್ಲರೂ ಉದ್ಧಾರ ಆಗ್ತಿದ್ದಾರೆ, ನಾನು ಸರಿಯಾಗುವುದು ಯಾವಾಗ? ಅಂತ ಯೋಚ್ನೆ ಮಾಡ್ತಾ ಬರ್‍ತಾಯಿದ್ದೆ.ನಮ್ಮ ಆಫೀಸ್ ಇರೋದು ರಾಜಭವನದ ಪಕ್ಕದ ರಸ್ತೆಯಲ್ಲಿ.ಎಸೈನ್‌ಮೆಂಟ್ ಆಗಷ್ಟೇ ಮುಗಿದಿತ್ತು. ನಾಳೆ ಏನಾದ್ರೂ ಸ್ಪೆಷಲ್ ಸ್ಟೋರಿ ಕೊಡ್ಲೇಬೇಕು ಅಂತ ಬೇರೆ ನಮ್ಮ ಚೀಫ್ ರಿಪೋರ್ಟರ್ ತಾಕೀತು ಮಾಡಿದ್ರು.. ಆ ಕ್ಷಣಕ್ಕೆ ನನಗೆ ಜಗತ್ತೇ ಖಾಲಿಯಾದಂತೆ ತೋರಿತು. ನಾನು ವಿಶೇಷ ವರದಿ ಮಾಡದೇ ಹತ್ತಿರತ್ತಿರ ತಿಂಗಳಾಗಿತ್ತು..ಹಾಗಾಗಿ ಮುಖ್ಯವರದಿಗಾರರಿಂದ ನಿರಂತರ ಬೆದರಿಕೆ.॒ಏನು ಮಾಡಲೂ ತೋಚದೇ ರಾಜಭವನ ರಸ್ತೆಯಲ್ಲಿ ಕೈಬೀಸಿಕೊಂಡು ಹೆಜ್ಜೆಹಾಕುತ್ತಿದ್ದೆ. ಅಲ್ಲಿಂದ ವಿದಾನ ಸೌಧದ ಕಡೆ ತಿರುಗಿದಾಗ ಬಾಡಿದ ಮುಖವೊಂದು ಕೈಯೊಡ್ಡಿತು. ಸುಮಾರು ಮೂವತ್ತು ಮೂವತ್ತೈದರ ಹೆಣ್ಣುಮಗಳು..ಕೈಯಲ್ಲೊಂದು ಪುಟ್ಟ ಹಸುಗೂಸು. ಆಗ ತಾನೆ ಹಾಲು ಕುಡಿದು ಮಲಗಿದಂತಿತ್ತು. ಸಿಕ್ಕಿದ ಚಿಲ್ಲರೆ ತೆಗೆದುಕೊಟ್ಟೆ. ಹಣವನ್ನು ಚೀಲಕ್ಕೆ ಹಾಕಿ ಬೇಗ ಬೇಗ ನಡೆಯತೊಡಗಿದಳು. ಆಕೆ ಅಷ್ಟು ರಭಸದಿಂದ ನಡೆಯುತ್ತಿದ್ದರೂ, ಆ ಪುಟ್ಟ ಕಂದಮ್ಮನಿಗೆ ಎಚ್ಚರವೇ ಆಗುತ್ತಿಲ್ಲನಿ॒ನ್ದು ಎಂಥ ಗಾಢ ನಿದ್ದೆಯೋ ಪೋರಅ॒ಂದುಕೊಂಡು ಆಕೆಯ ಹಿಂದೆಯೇ ಹೆಜ್ಜೆ ಹಾಕಿದೆ. ಸ್ವಲ್ಪ ಮುಂದೆ ಹೋದಾಗ ಮಗು ತುಸು ಅಲ್ಲಾಡಿತು. ಎಚ್ಚರಾಗಿದ್ದೇ ಮುಸು ಮುಸು ಅಳುವಿಗಿಟ್ಟುಕೊಂಡಿತು. ಈಕೆ ಗಡಿಬಿಡಿಯಿಂದ ಅಲ್ಲಿಂದ ದಾಟಿ, ಕಬ್ಬನ್ ಪಾರ್ಕ್‌ನತ್ತ ನಡೆಯತೊಡಗಿದಳು. ಸ್ವಲ್ಪ ಮುಂದೆ ಬಂದು ಮರದಡಿ ಕೂತು ನೀರಿನ ಬಾಟಲಿ ತೆಗೆದು, ಅದಕ್ಕೆ ಯಾವುದೋ ಮಾತ್ರೆ ಹಾಕಿ, ಮಗುವಿಗೆ ಕುಡಿಸಿದಳು. ನೀರು ಸ್ವಲ್ಪ ಕಹಿಯಾಗಿರ್‌ಬೇಕು, ಮಗು ಮೊದಲು ನೀರಿನ ಬಾಟಲಿಯನ್ನು ತನ್ನ ಪುಟ್ಟ ಕೈಯಿಂದ ತಳ್ಳತೊಡಗಿತು. ಆ ಹೆಂಗಸು ಮಗುವಿನ ಕಾಲನ್ನು ತನ್ನ ಕಾಲೊಳಗೆ ತೂರಿಸಿ ಹಿಡಿದು, ಅದರ ಎಳೇ ಮೂಗನ್ನು ಕೆಂಪಾಗುವಂತೆ ಒತ್ತಿ ಹಿಡಿದು,ಬಾಯಿ ತೆರೆಸಿ ನೀರು ಕುಡಿಸಲು ಶುರುವಿಟ್ಟಳು. ಮಗು ಕಿಟಾರನೆ ಕಿರಿಚುತ್ತಾ ಉಸಿರಾಡಲು ಹೆಣಗಾಡುತ್ತಿತ್ತು. ಆದರೂ ಹೆಂಗಸಿನ ಕೈ ಸಡಿಲವಾಗಲಿಲ್ಲ. ಸ್ಪಲ್ಪ ಹೊತ್ತಾದ ಮೇಲೆ ಮಾತ್ರೆಯ ಪ್ರಭಾವಕ್ಕೋ ಅಥವಾ ಪ್ರಜ್ಙೆ ತಪ್ಪಿಯೋ ಮಗು ಮತ್ತೆ ಕಣ್ಮುಚ್ಚಿತು.ಈಕೆ ನಿಟ್ಟಿಸಿರು ಬಿಟ್ಟು ಅಲ್ಲೇ ಹೋಗಿ ಬರುವವರ ಎದುರು ಕೈಚಾಚುತ್ತಿದ್ದಳು. ಈಕೆಯ ದೈನ್ಯ ಮುಖ ಕಂಡು ಜನ ಒಂದಿಷ್ಟು ಚಿಲ್ಲರೆ ಚೆಲ್ಲುತ್ತಿದ್ದರು. ಅಷ್ಟರಲ್ಲಿ ಪಕ್ಕದಲ್ಲೇ ಅಂತದೇ ಪುಟ್ಟ ಸಣಕಲು ಮಗು ಹಿಡಿದುಕೊಂಡು ಹುಡುಗಿ ಪ್ರತ್ಯಕ್ಷಳಾಗಿ, ಈ ಹೆಂಗಸಿನೊಂದಿಗೆ, ಹಿಂದಿ ಬೆರೆತ ಭಾಷೆಯಲ್ಲಿ ಮಾತಿಗಾರಂಭಿಸಿದಳು. ಆಕೆ ಎಷ್ಟಾಯ್ತು? ಎಂದಾಗ ಈಕೆ, ಮಗುವಿನತ್ತ ಕೈ ತೋರಿಸಿ, ಈ ಪೀಡೆಯಿಂದಾಗಿ ಏನು ವ್ಯಾಪಾರಾನೂ ನಡೀತಿಲ್ಲ. ಮೊದ್ಲು ಇದನ್ನು ಬದಲಿಸಬೇಕು, ಪ್ರತೀ ದಿನ ನೂರು ರೂಪಾಯಿ ಕೊಡೋದು ದಂಡ. ಅಸಲೇ ಬರಲ್ಲ. ಮೊದ್ಲು ಸುಮ್ಮನಿರ್‍ತಿತ್ತು. ಈಗ ಪಿರಿಪಿರಿ ಜಾಸ್ತಿಯಾಗಿದೆಅ॒ಂತ ಶುರುವಿಟ್ಟುಕೊಂಡಳು. ಆ ಹುಡುಗಿ, ಏನಾದ್ರೂ ಕೊಟ್ಯಾ? ಕೇಳಿದಳು. ನಮ್ಮ ಹೊಟ್ಟೆಗೇ ಗತಿಯಿಲ್ಲ, ಇದಕ್ಕೆ ಬೇರೆ ಕೇಡು ಉಢಾಫೆಯಿಂದ ಉತ್ತರಿಸಿದಳು. ನಿಂಗೇನು, ಇನ್ನೂ ಅಂತಾ ವಯಸ್ಸಾಗಿಲ್ಲ..ಇನ್ನೊಂದು ಹೆತ್ತು ಬಿಡು. ಆಗ ನೂರು ರೂಪಾಯಿ ಕೊಡೋದೂ ಉಳೀತು.॒ಅಂತ ಹುಡುಗಿ ಏನೋ ಪೋಲಿ ಜೋಕು ಹಾರಿಸಿ ಜೋರಾಗಿ ನಕ್ಕಳು. ಈಕೆ ಮೂತಿ ಸೊಟ್ಟಗೆ ಮಾಡಿ, ಅದೇ ಧಾಟಿಯಲ್ಲಿ ಉತ್ತರಿಸಿದಳು. ನಿಂಗೇನು ಹುಡ್ಗೀ, ವಯಸ್ಸಿದೆ, ತಾಖತ್ತಿದೆ, ಎವತ್ತೆಷ್ಟು ಮಿಕಗಳು? ಎಂದು ಹುಬ್ಬು ಹಾರಿಸಿ, ಮತ್ತೆ ವ್ಯಾಪಾರದತ್ತ ಗಮನಹರಿಸಿದಳುನಾ॒ನು, ಕ್ಯಾಮರಾ ಸಮೇತ ಇವರನ್ನು ಬಲಿಹಾಕೋದು ಹೇಗೆ? ಅಂತ ಯೋಚಿಸ್ತಾ ಆಫೀಸ್ ಕಡೆ ಮುಖ ಮಾಡಿದೆ.

Permalink Leave a Comment

January 26, 2008 at 12:18 pm (Uncategorized)

ಸಂಜೆ ಕಳೆದು ರಾತ್ರಿಯಾಗುತ್ತಿತ್ತು. ಆಗ ತಾನೇ ಪೆಟ್ಟು ತಿಂದು ಅತ್ತು, ಯಾರೂ ನನ್ನ ಸಮಾಧಾನಕ್ಕೆ ಬರುವುದಿಲ್ಲ ಅಂತ ಗೊತ್ತಾಗಿ ಮುಸು ಮುಸು ಮಾಡುತ್ತಾ ಕೂತಿದ್ದೆ. ವಿಷಯ ಬೇರೇನಲ್ಲ. ನಾನು ಚಿಕ್ಕಮ್ಮನ ಪರ್ಸ್‌ನಿಂದ ಇಪ್ಪತ್ತು ರೂಪಾಯಿ ಕದ್ದಿದ್ದೆ. ಆ ಹಣದಲ್ಲಿ ಒಂದು ಪ್ಯಾಕೇಟ್ ಜೇನುಂಡೆ, ಆಕ್ರೋಟ್, ಐಸ್‌ಕ್ಯಾಂಡಿ ಎಲ್ಲ ತಗೊಂಡು ಯಾರಿಗೂ ಕೊಡದೆ ತಿಂದಿದ್ದೆ. ಯಾಕೇಂದ್ರೆ ಪ್ರತೀ ದಿನ ಅವ್ರು ನನಗೇನೂ ಕೊಡದೇ ತಿನ್ನುತ್ತಿದ್ದರು. ನಾನು ಬೆಳಗ್ಗಿನಿಂದಲೇ ಅಮ್ಮನತ್ರ ದುಡ್ಡಿಗೆ ಚೌಕಾಸಿ ಮಾಡಿದರೂ ಚಿಕ್ಕಾಸೂ ಗಿಟ್ಟುತ್ತಿರಲಿಲ್ಲ. ಅಂದ ಹಾಗೇ ಚಿಕ್ಕಮ್ಮ ಗಡಿಬಿಡಿಯಲ್ಲಿ ಪರ್ಸ್ ಎತ್ತಿಕೊಂಡು ಹೋಗಿದ್ದಾಳೆ.ಬಸ್‌ನಲ್ಲಿ ಕಂಡೆಕ್ಟರ್ ಟಿಕೇಟು ಕೇಳಿದ್ರೆ ಪರ್ಸ್ ಖಾಲಿ ! ಆ ಕಂಡೆಕ್ಟರ್ ಮೊದಲು ನಮ್ಮ ಅಜ್ಜನ ಮನೆಗೇ ಕೆಲಸಕ್ಕೆ ಬರುತ್ತಿದ್ದ ಕಾರಣ, ಚಿಕ್ಕಮ್ಮನ ಯಡವಟ್ಟಿಗೆ ನಕ್ಕು ಸುಮ್ಮನಾಗಿದ್ದ.
ಸಂಜೆ ಕಳೆದು ರಾತ್ರಿಯಾಗುತ್ತಿತ್ತು. ಆಗ ತಾನೇ ಪೆಟ್ಟು ತಿಂದು ಅತ್ತು, ಯಾರೂ ನನ್ನ ಸಮಾಧಾನಕ್ಕೆ ಬರುವುದಿಲ್ಲ ಅಂತ ಗೊತ್ತಾಗಿ ಮುಸು ಮುಸು ಮಾಡುತ್ತಾ ಕೂತಿದ್ದೆ. ವಿಷಯ ಬೇರೇನಲ್ಲ. ನಾನು ಚಿಕ್ಕಮ್ಮನ ಪರ್ಸ್‌ನಿಂದ ಇಪ್ಪತ್ತು ರೂಪಾಯಿ ಕದ್ದಿದ್ದೆ. ಆ ಹಣದಲ್ಲಿ ಒಂದು ಪ್ಯಾಕೇಟ್ ಜೇನುಂಡೆ, ಆಕ್ರೋಟ್, ಐಸ್‌ಕ್ಯಾಂಡಿ ಎಲ್ಲ ತಗೊಂಡು ಯಾರಿಗೂ ಕೊಡದೆ ತಿಂದಿದ್ದೆ. ಯಾಕೇಂದ್ರೆ ಪ್ರತೀ ದಿನ ಅವ್ರು ನನಗೇನೂ ಕೊಡದೇ ತಿನ್ನುತ್ತಿದ್ದರು. ನಾನು ಬೆಳಗ್ಗಿನಿಂದಲೇ ಅಮ್ಮನತ್ರ ದುಡ್ಡಿಗೆ ಚೌಕಾಸಿ ಮಾಡಿದರೂ ಚಿಕ್ಕಾಸೂ ಗಿಟ್ಟುತ್ತಿರಲಿಲ್ಲ. ಅಂದ ಹಾಗೇ ಚಿಕ್ಕಮ್ಮ ಗಡಿಬಿಡಿಯಲ್ಲಿ ಪರ್ಸ್ ಎತ್ತಿಕೊಂಡು ಹೋಗಿದ್ದಾಳೆ.ಬಸ್‌ನಲ್ಲಿ ಕಂಡೆಕ್ಟರ್ ಟಿಕೇಟು ಕೇಳಿದ್ರೆ ಪರ್ಸ್ ಖಾಲಿ ! ಆ ಕಂಡೆಕ್ಟರ್ ಮೊದಲು ನಮ್ಮ ಅಜ್ಜನ ಮನೆಗೇ ಕೆಲಸಕ್ಕೆ ಬರುತ್ತಿದ್ದ ಕಾರಣ, ಚಿಕ್ಕಮ್ಮನ ಯಡವಟ್ಟಿಗೆ ನಕ್ಕು ಸುಮ್ಮನಾಗಿದ್ದ.
ಮನೆಗೆ ಬಂದ ಚಿಕ್ಕಮ್ಮನಿಂದ ನನಗೆ ಬುಲಾವ್ ಬಂತು. ಸರಿ, ವಿಚಾರಣೆ ಸುರು..ನಾನು ನಿಂಗೇನು ಕಡಿಮೆ ಮಾಡಿದ್ದೀನಿ? ನೀನು ಏನಾದ್ರೂ ಬೇಕು ಅಂದ್ರೆ ತರ್ತಿರಲಿಲ್ವಾ? ಅಂತೆಲ್ಲಾ ದಬಾಯಿಸಿದಳು. ಜತೆಗೆ ಅಪ್ಪನಿಂದ ಗಾಳಿ ಬೆತ್ತದಿಂದ ರಕ್ತ ಬರುವಂತೇ ಪೆಟ್ಟೂ ಬಿತ್ತು…ನಾನು ಊರೇ ಮುಳುಗುವಂತೆ ಕೂಗಿದರೂ, ಯಾರ ಕೃಪಾಕಟಾಕ್ಷವೂ ನನ್ನ ಮೇಲೆ ಬೀಳಲಿಲ್ಲ. ಮತ್ತೇನು ಮಾಡುವುದು ? ಸುಮ್ಮನಾದೆ.
* * * * *

Permalink Leave a Comment

spota

January 19, 2008 at 3:28 pm (Uncategorized)

£Á¬Ä ¨Á®PÉÌ ¥ÀmÁQ ºÀaÑ CzÀÄ ¹rAiÀÄĪÀÅzÀ£ÉßÃ

PÁAiÀÄĪÀ D ¥ÉÆÃ° ºÀÄqÀÄUÀ…

Permalink 1 Comment